   ಮೂಲದೊಡನೆ ಪರಿಶೀಲಿಸಿ

ಕನಿಷ್ಠ ಎಣಿಕೆ : ಮಾಪಕಯಂತ್ರಗಳಿಗೆ ಜೋಡಿಸಿರುವ ಅಳತೆಪಟ್ಟಿಗಳ ಮೇಲಿನ ಸಮಾಂತರ ಗೆರೆಗಳ ನಡುವಿನ ಅಂತರ (ಲೀಸ್ಟ್‌ಕೌಂಟ್). ಇದು ಕಡಿಮೆಯಾಗಿದ್ದಷ್ಟೂ ಅಳತೆಯ ನಿಖರತೆ ಹೆಚ್ಚು. ಮುಖ್ಯ ಅಳತೆಪಟ್ಟಿಯ (ಮೇನ್ಸ್ಕೇಲ್) ಭಾಗಗಳನ್ನು ಹೆಚ್ಚುವರಿಸಿ 

ಅದರೊಂದಿಗೆ ಭಾಗಮಾಡಿರುವ ಮತ್ತೊಂದು ಚಲಮಾಪಕ ಪಟ್ಟಿಯನ್ನು (ವರ್ನಿಯರ್) ಜೋಡಿಸಿ ಓದುವುದರ ಮೂಲಕ ಕನಿಷ್ಠ ಎಣಿಕೆಯನ್ನು ಇನ್ನಷ್ಟು ಹೆಚ್ಚು ಸೂಕ್ಷ್ಮಗೊಳಿಸಬಹುದು. ಈ ಸೂಕ್ಷ್ಮತೆ ಚಲಮಾಪಕ ಪಟ್ಟಿಯ ಕನಿಷ್ಠ ಎಣಿಕೆಯನ್ನು ಅವಲಂಬಿಸಿದೆ.                    

                   (ಕೆ.ಎಸ್.ಕೆ.)
ಚಿತ್ರದಲ್ಲಿ ಂಃ ಮುಖ್ಯ ಅಳತೆಪಟ್ಟಿಯ ಒಂದು ಭಾಗ. ಅಆ ಚಲಮಾಪಕ ಪಟ್ಟಿ. ಔಅ ಒಂದು ವಸ್ತು. ಔಅಯ ಉದ್ದವನ್ನು ದಶಕಸ್ಥಾನದಷ್ಟು ನಿಖರವಾಗಿ ಆಳೆಯಲು ಅಆಯ ಉದ್ದವನ್ನು ಮುಖ್ಯ ಅಳತೆಪಟ್ಟಿಯ 9 ಅಂಶಗಳಿಗೆ ಸಮನಾಗಿರುವಂತೆ ಮಾಡಿ ಅದನ್ನು ಮತ್ತೆ 10 

ಸಮ ಅಂಶಗಳನ್ನಾಗಿ ವಿಭಾಗಿಸಿದೆ. ಚಲಮಾಪಕದ ಒಂದು ಅಂಶ ಮುಖ್ಯ ಅಳತೆಪಟ್ಟಿಯ ಒಂದು ಅಂಶದ 9/10ಕ್ಕೆ ಸಮ. ಆದ್ದರಿಂದ ಚಲಮಾಪಕದ ಒಂದು ಅಂಶಕ್ಕೂ ಮುಖ್ಯ ಅಳತೆ ಪಟ್ಟಿಯ ಒಂದು ಅಂಶಕ್ಕೂ ಇರುವ ವ್ಯತ್ಯಾಸ ಮುಖ್ಯ ಅಳತೆಪಟ್ಟಿಯ ಅಂಶವೊಂದರ 

1/10 ಕ್ಕೆ ಸಮನಿರುತ್ತದೆ. ಈ ವ್ಯತ್ಯಾಸವೇ ಚಲಮಾಪಕದ ಕನಿಷ್ಠ ಎಣಿಕೆ.
ಚಲಮಾಪಕದ 3ನೆಯ ಗೆರೆ ಮುಖ್ಯ ಅಳತೆಪಟ್ಟಿಯ 8ನೆಯ ಗೆರೆಯ ಮೇಲೆ ಇದೆ. ಮುಖ್ಯ ಅಳತೆಪಟ್ಟಿಯ 5ನೆಯ ಗೆರೆ ಮತ್ತು ಚಲಮಾಪಕದ ಸೊನ್ನೆಗೂ ಇರುವ ಅಂತರ ಮುಖ್ಯ ಅಳತೆಪಟ್ಟಿಯ ಅಂಶವೊಂದರ 3/10ರಷ್ಟಿದೆ. ಆದ್ದರಿಂದ ಔಅಯ ಸರಿಯಾದ ಉದ್ದ 5 ಮುಖ್ಯ 

ಅಳತೆಪಟ್ಟಿಯ ಅಂಶಗಳು + ಮುಖ್ಯ ಅಳತೆಪಟ್ಟಿಯ ಅಂಶವೊಂದರ 3/10ರಷ್ಟು. ಅಂದರೆ 5.3 ಮುಖ್ಯ ಅಳತೆಪಟ್ಟಿಯ ಅಂಶದಷ್ಟು.              *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ